ಅಂಶವೊಂದನ್ನು ಸಾಬೀತುಪಡಿಸಲು ಬಯಸಿದ್ದೆ: ಮನವಿಂದರ್ ಬಿಸ್ಲಾ

WD
ಭಾನುವಾರದ ಐಪಿಎಲ್ ಫೈನಲ್ ಪಂದ್ಯವನ್ನು ಈ ಪಂಜಾಬ್ ಆಟಗಾರ ಸದ್ಯಕ್ಕಂತೂ ಮರೆಯಲಿಕ್ಕಿಲ್ಲ. ಯಾಕೆಂದರೆ ಪಂದ್ಯ ಆರಂಭಕ್ಕೂ ಮುನ್ನ ಬಿಸ್ಲಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿದ್ದಾರೆಂದು ಯಾರೂ ಅಂದುಕೊಂಡಿರಲಿಲ್ಲ.
ಆದರೆ ಲಕ್ಷೀಪತಿ ಬಾಲಾಜಿ ಗಾಯಗೊಂಡ ಬೆನ್ನಲ್ಲೇ ತಂಡದ ಹೊಂದಾಣಿಕೆಗಾಗಿ ಬ್ರೆಟ್ ಲೀ ಅವರನ್ನು ಸೇರಿಸಿಕೊಂಡಿದ್ದರಿಂದ ನ್ಯೂಜಿಲೆಂಡ್ ಮೂಲದ ಬ್ರೆಂಡನ್ ಮೆಕಲಮ್ ಅವಕಾಶ ವಂಚಿತರಾಗಬೇಕಾಯಿತು. ಇದರಿಂದಾಗಿ ಈ ಪಂದ್ಯದಲ್ಲಿ ಆಡುವ ಅವಕಾಶವನ್ನು ಬಿಸ್ಲಾ ಪಡೆದಿದ್ದರು.
ಆ ಬಳಿಕ ನಡೆದಿರುವುದು ಎಲ್ಲರಿಗೂ ತಿಳಿದಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯುವ ಮೂಲಕ ಒತ್ತಡ ಪರಿಸ್ಥಿತಿಯನ್ನು ನಿಭಾಯಿಸಿದ ಅವರು ಕೆಕೆಆರ್‌ಗೆ ಚೊಚ್ಚಲ ಐಪಿಎಲ್ ಪ್ರಶಸ್ತಿ ದೊರಕಿಸಿಕೊಟ್ಟಿದ್ದರು.
ನನಗೆ ನನ್ನ ಸಂತೋಷವನ್ನು ವ್ಯಕ್ತಪಡಿಸಲಾಗುತ್ತಿಲ್ಲ. ನಾನು ದಂಗಾಗಿಬಿಟ್ಟಿದ್ದೇನೆ. ಈ ದೊಡ್ಡ ಪಂದ್ಯದಲ್ಲಿ ಅಂಶವೊಂದನ್ನು ನಿರೂಪಿಸಲು ಬಯಸಿದ್ದೆ. ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ದೊರಕುವ ಮೂಲಕ ನನ್ನ ಪರಿಶ್ರಮಕ್ಕೀಗ ಫಲ ದೊರಕಿದೆ ಎಂದರು.
ನಾಯಕ ಗಂಭೀರ್ ವಿಕೆಟ್ ಕಳೆದುಕೊಂಡಾಗ ನಾನು ಸ್ವಲ್ಪ ಆಂತಕಗೊಂಡಿದ್ದೆ. ಹಾಗಿದ್ದರೂ ಆತ್ಮವಿಶ್ವಾಸ ಕೈಬಿಟ್ಟಿರಲಿಲ್ಲ. ಚೆಂಡಿನ ಮೆರಿಟ್‌ಗೆ ಅನುಗುಣವಾಗಿ ಆಡಲು ಆರಂಭಿಸಿದೆ. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಯಿತು. ಅಲ್ಲದೆ ಕ್ರಿಕೆಟ್ ದಂತಕಥೆ ಜಾಕ್ವಾಸ್ ಕಾಲಿಸ್‌ರಿಂದ ಉತ್ತಮ ಬೆಂಬಲ ದೊರಕಿತ್ತು. ಅಲ್ಲದೆ ನನಗೆ ಸಹಜ ಆಟವಾಡುವಂತೆ ಸಲಹೆ ಮಾಡಿರುವುದಾಗಿ ತಿಳಿಸಿದರು.
ಇವನ್ನೂ ಓದಿ

No comments:
Post a Comment