സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Sunday, November 27, 2011


ಸಮಸ್ತ ಸಮ್ಮೇಳನ ಸ್ಥಳದಲ್ಲಿ ಎಸ್‌ಎಸ್‌ಎಫ್ ಕಟೌಟ್ ಪ್ರತ್ಯಕ್ಷ…!!

              

ಮಂಗಳೂರು: ಸಮಸ್ತ ಪ್ರಚಾರ ಮಹಾ ಸಮ್ಮೇಳನಕ್ಕೆ ಎರಡು ದಿನಗಳು ಬಾಕಿಯಿರುವಾಗಲೇ ಸಮ್ಮೇಳನ ನಡೆಯುವ ಸ್ಥಳದ ಮುಂಭಾಗದಲ್ಲಿ ಎಸ್‌ಎಸ್‌ಎಫ್ ಕಟೌಟ್ ಪ್ರತ್ಯಕ್ಷ ಗೊಂಡಿದ್ದು ಇದು ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಮಸ್ತ ಕೇರಳ ಜಂಇಯತ್ತುಲ್ ಉಲಾಮಾ ಇದರ ೮೫ನೇ ವಾರ್ಷಿಕ ಮಹಾ ಸಮ್ಮೇಳನವು ಮುಂದಿನ ವರ್ಷ ಫೆಬ್ರವರಿ ೨೩ರಿಂದ೨೬ರವರೆಗೆ ಕೇರಳದ ಕೂರಿಯಾಡ್ ಮಲಪ್ಪುರಂನಲ್ಲಿ ನಡೆಯಲಿದೆ. ಇದರ ಅಂಗವಾಗಿ ದ.ಕ. ಜಿಲ್ಲಾ ಸಮಸ್ತ ಮುಶಾವರದ ವತಿ ಯಿಂದ ನಾಳೆ ಅಡ್ಯಾರ್-ಕಣ್ಣೂರಿನಲ್ಲಿ ಪ್ರಚಾರ ಮಹಾ ಸಮ್ಮೇಳನ ಮತ್ತು ಮದ್ರಸಾ ಸೆಮಿನಾರ್ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಮಸ್ತದ ಘಟಾನುಘಟಿ ನಾಯಕರು ಭಾಗವ ಹಿಸಲಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಸರ್ವ ಸಿದ್ಧತೆ ನಡೆ ಯುತ್ತಿದೆ. ಇನ್ನೇನು ಎರಡು ದಿನಗಳಷ್ಟೇ ಬಾಕಿಯಿದ್ದು ಈ ಮಧ್ಯೆ ನಿನ್ನೆ ಬೆಳಿಗ್ಗೆ ಕಾರ್ಯಕ್ರಮ ನಡೆಯುವ ಸ್ಥಳದ ಮುಂಭಾಗದಲ್ಲಿ ಪ್ರವಾದಿ (ಸ.ಅ) ಯ ವರ ಕೇಶಕ್ಕಾಗಿ ಎಪಿ ಉಸ್ತಾದ್‌ರಿಂದ ನಿರ್ಮಾಣವಾಗಲಿರುವ ಶಹರೇ ಮುಬಾರಕ್ ಮಸೀದಿಯ ಚಿತ್ರವುಳ್ಳ ಕಟೌಟ್ ಕಂಡು ಬಂದಿದೆ.
ಕಟೌಟ್‌ನಲ್ಲಿ ಜಾಮಿಯಾ ಸದಿಅದಿಯ್ಯ ಅರಬಿಯ್ಯ ವತಿಯಿಂದ ಮುಂದಿನ ವರ್ಷ ನಡೆಯುವ ಸನದು ದಾನ ಸಮ್ಮೇಳನಕ್ಕೆ ಶುಭ ಹಾರೈಸ ಲಾಗಿದೆ. ಇದನ್ನು ಸಮಸ್ತ ಸಮ್ಮೇಳನ ನಡೆಯುವ ಸ್ಥಳದ ಮುಂಭಾಗ ಇರುವ ಮಸೀದಿಯ ಪಕ್ಕದಲ್ಲಿ ಅಳವಡಿಸಲಾ ಗಿದೆ. ಅದನ್ನು ಇಬ್ಬರು ಎಸ್‌ಎಸ್‌ಎಫ್ ಕಾರ್ಯಕರ್ತರು ಮೊನ್ನೆ ರಾತ್ರಿ ಅಳವಡಿ ಸಿದ್ದಾರೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಕಟೌಟ್ ಕಂಡ ಸಮಸ್ತ ಅಭಿಮಾನಿಗಳು ಅದನ್ನು ತೆರವುಗೊಳಿಸಲು ಮುಂದಾದರಾದರೂ ಸಮ್ಮೇಳನಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದಾರೆ.
ಸಮಸ್ತ ಕಾರ್ಯಕರ್ತರು ಕಳೆದ ಕೆಲವು ದಿನಗಳಿಂದ ಸಮ್ಮೇಳನ ನಡೆಯುವ ಪರಿಸರದಲ್ಲಿ ಅಹೋರಾತ್ರಿ ಕಟೌಟ್, ಬ್ಯಾನರ್ ಮತ್ತು ಅಲಂಕಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನು ಸಹಿಸದ ಕುಹಕಿಗಳು ಎಸ್‌ಎಸ್‌ಎಫ್ ಕಟೌಟ್ ಅಳವಡಿಸಿ ಗಲಾಟೆ ಎಬ್ಬಿಸಿ ಸಮಾವೇಶವನ್ನು ಹಾಳುಗೆಡವುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ದೂರಿರುವ ಸಮಸ್ತ ಅಭಿಮಾನಿಗಳು, ಅಲ್ಲದಿದ್ದರೆ ಇದುವರೆಗೂ ಇಲ್ಲದ ಕಟೌಟ್ ಸಮಸ್ತ ಸಮ್ಮೇಳನಕ್ಕೆ ಎರಡು ದಿನಗಳಿರುವಾಗ ಅದೂ ಸಮ್ಮೇಳನ ನಡೆಯುವ ಸ್ಥಳದ ಮುಂಭಾ ಗದಲ್ಲಿಯೇ ಹಾಕಿರುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂಲೀಗ್ ದೂರು
ಸಮಸ್ತ ಸಮ್ಮೇಳನ ನಡೆಯುವ ಸ್ಥಳದ ಮುಂಭಾಗದಲ್ಲಿ ಪ್ರತ್ಯಕ್ಷಗೊಂಡಿ ರುವ ಕಟೌಟ್ ಬಗ್ಗೆ ಮುಸ್ಲಿಂ ಲೀಗ್ ಸಿಡಿಮಿಡಿಗೊಂಡಿದ್ದು ಕಂಕನಾಡಿ ಠಾಣೆಗೆ ದೂರು ನೀಡಿದೆ. ಇದು ಸಮ್ಮೇಳನಕ್ಕೆ ಅಡ್ಡಿಪಡಿಸಿ ಶಾಂತಿಯನ್ನು ಕದಡುವ ಹುನ್ನಾರವಾಗಿದೆ. ಸಮ್ಮೇಳನದ ದಿನ ಸಾರ್ವಜನಿಕರು ಕಟೌಟ್‌ಗೆ ಹಾನಿ ಮಾಡಿದಲ್ಲಿ ಸಮಸ್ತದ ಹೆಸರು ಹಾಳಾಗುತ್ತದೆ. ಅಲ್ಲದೆ ಶಾಂತಿ ಕದಡಲೂ ಇದು ಕಾರಣವಾಗುತ್ತದೆ. ಆ ಕಾರಣದಿಂದಾಗಿ ಸಮ್ಮೇಳನ ಮುಗಿಯುವವರೆಗೆ ಕಟೌಟ್ ತೆರವುಗೊಳಿಸಿ ಶಾಂತಿ ಕಾಪಾಡಬೇಕು ಎಂದು ಮುಸ್ಲಿಂ ಲೀಗ್ ಮುಖಂಡ ರಿಯಾಝ್ ಹರೇಕಳ ಪೊಲೀಸರಲ್ಲಿ ವಿನಂತಿಸಿದ್ದಾರೆ.

No comments: