സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Friday, November 25, 2011


‘ಡ್ಯಾಮ್ 999’ ಪ್ರದರ್ಶನಕ್ಕೆ ತಮಿಳುನಾಡಿನಲ್ಲಿ ನಿಷೇಧ

            
ಚೆನ್ನೈ, ನ. 24: ವಿವಾದಿತ ಹಾಲಿವುಡ್ ಚಿತ್ರ ‘ಡ್ಯಾಮ್ 999’ ಬಿಡುಗಡೆಗೆ ತಮಿಳುನಾಡು ಸರಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಚಿತ್ರದ ನಿರ್ದೇಶಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತಿಸಿದ್ದಾರೆ. ಮುಲ್ಲಾ ಪೆರಿಯಾರ್ ಅಣೆಕಟ್ಟು ವಿವಾದದ ನಡುವೆ ಈ ವಿವಾದಿತ ಚಿತ್ರದ ಬಿಡುಗಡೆಗೆ ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ, ತಮಿಳುನಾಡು ಸರಕಾರ ಈ ಚಿತ್ರದ ಬಿಡುಗಡೆಗೆ ನಿಷೇಧ ಹೇರಿ ಆದೇರಾಜ್ಯ ಹಾಗೂ ಕೇರಳದ ನಡುವಿನ ಬಾಂಧವ್ಯ ಹಾಳುಗೆಡವುದಲ್ಲದೆ, ಸಮಾಜದಲ್ಲಿ ಅಶಾಂತಿ ಮೂಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗಬಹುದಾದ ಹಿನ್ನೆಲೆಯಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿದೆ ಎಂದು ತಮಿಳುನಾಡು ಸರಕಾರದ ಮೂಲಗಳು ತಿಳಿಸಿವೆ.

‘‘ಮುಲ್ಲ ಪೆರಿಯಾರ್ ಅಣೆಕಟ್ಟು ವಿವಾದ(ಕೇರಳ-ತಮಿಳುನಾಡು ನಡುವೆ)ದ ಕುರಿತು ಚಿತ್ರದ ಹೆಸರು ಪ್ರಸ್ತಾಪಿಸುತ್ತದೆ. ಅಣೆಕಟ್ಟು ಕುಸಿತದ ವಿಷಯಕ್ಕೆ ಸಂಬಂಧಿಸಿ ಜನರ ನಡುವೆ ಭಯವಿರುವುದರಿಂದ ಮತ್ತು ಇದು ಎರಡು ರಾಜ್ಯಗಳ ಜನರನ್ನು ವಿಭಜಿಸುವುದರಿಂದ ಮುಖ್ಯಮಂತ್ರಿ ಜೆ.ಜಯಲಲಿತಾ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸುವುದಕ್ಕೆ ನಿಷೇಧ ಹೇರಿ ಆದೇಶಿಸಿದ್ದಾರೆ’’ ಎಂದು ಮುಖ್ಯ ಕಾರ್ಯದರ್ಶಿ ದೇಬೇಂದ್ರನಾಥ್ ಸಾರಂಗಿ ಹೇಳಿದ್ದಾರೆ.
   
ಸೆನ್ಸಾರ್ ಮಂಡಳಿಯಿಂದ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ, ಈ ವಿಷಯಕ್ಕೆ ಸಂಬಂಧಿಸಿ ತಾನು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಚಿತ್ರ ನಿರ್ದೇಶಕ ಸೋಹನ್ ರಾಯ್ ಹೇಳಿದ್ದಾರೆ.

‘‘ಇಂತಹ ಕಲಾತ್ಮಕ ಕೆಲಸ ಅಥವಾ ಚಿತ್ರಕ್ಕೆ ಭಾರತದಲ್ಲಿ ಈ ರೀತಿ ಆಗಕೂಡದು. ಇಂತಹ ಕೃತ್ಯಗಳು ಕಲಾತ್ಮಕ ಮನಸ್ಸುಗಳನ್ನು ಕೊಲ್ಲುತ್ತವೆ’’ ಎಂದು ಚಿತ್ರದ ಬಿಡುಗಡೆಗೆ ಸಂಬಂಧಿಸಿ ದುಬೈನಲ್ಲಿರುವ ರಾಯ್ ಹೇಳಿದ್ದಾರೆ. ಚಿತ್ರಕ್ಕೆ ನಿಷೇಧ ಹೇರಿರುವುದು ಸಮಾಜದಲ್ಲಿ ತಪ್ಪು ಸಂದೇಶ ನೀಡುತ್ತದೆ. ಚಿತ್ರದಲ್ಲಿ ಮುಲ್ಲಾ ಪೆರಿಯಾರ್ ಅಣೆಕಟ್ಟು ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ರಾಯ್ ಸ್ಪಷ್ಟ ಪಡಿಸಿದ್ದಾರೆ.ಶ ಹೊರಡಿಸಿದೆ.

No comments: