സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Monday, October 10, 2011


ಒಬಾಮ ಭಾಷಣಕ್ಕೆ ಹಾಜರಾಗಲು ಎಡರಂಗ ನಿರ್ಧಾರ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಸಂಸತ್ತನ್ನುದ್ದೇಶಿಸಿ ಮಾತನಾಡಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ಮಾತುಗಳನ್ನು ಕೇಳಲು ಫಾರ್ವರ್ಡ್ ಬ್ಲಾಕ್‌ನ್ನು ಹೊರತು ಪಡಿಸಿ ಉಳಿದ ಎಡ ಪಕ್ಷಗಳು ನಿರ್ಧರಿಸಿವೆ.ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿರುವ ಒಬಾಮರ ಭಾಷಣವನ್ನು ಆಲಿಸಲು ಎಡ ಪಕ್ಷಗಳು ಸಹಮತ ವ್ಯಕ್ತಪಡಿಸಿವೆ. ತಾವು ಅಮೆರಿಕದ ನೀತಿಯನ್ನು ಖಂಡಿಸುತ್ತೇವೆ.

ಆದರೆ ಒಬಾಮರ ಭಾಷಣಕ್ಕೆ ಬಹಿಷ್ಕಾರ ಹಾಕುವುದಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ. ಬರಾಕ್ ಒಬಾಮ ಜಾರ್ಜ್ ಬುಷ್‌ರಂತಲ್ಲ, ಹೀಗಾಗಿ ಒಬಾಮಗೆ ಬಹಿಷ್ಕಾರ ಹಾಕುವುದಿಲ್ಲ ಎಂದು ಸಿಪಿಎಂ ಹಿಂದೆಯೇ ಘೋಷಿಸಿತ್ತು. ಆದರೆ ಫಾರ್ವರ್ಡ್ ಬ್ಲಾಕ್ ಮಾತ್ರ ಭಿನ್ನ ನಿಲುವನ್ನು ಹೊಂದಿದ್ದು, ತನ್ನ ಕಾರ್ಯಕರ್ತರು ಹೊರಗಡೆಯಿಂದ ಪ್ರತಿಭಟನೆ ನಡೆಸುತ್ತಿರುವಾಗ ತಾವು ಮಾತ್ರ ಸಂಸತ್ತಿನೊಳಗೆ ಅಮೆರಿಕ ಅಧ್ಯಕ್ಷರ ಭಾಷಣ ಕೇಳುತ್ತಿರುವುದು ಸರಿಯಾಗುವುದಿಲ್ಲ ಎಂದು ಪಕ್ಷದ ಮೂಲಗಳು ಅಭಿಪ್ರಾಯ ಪಟ್ಟಿವೆ.

No comments: