ಮೀಪಗುರಿಯಲ್ಲಿ ಹಿಂಸಾಚಾರ: ಎರಡು ಬೈಕ್‌ಗಳು ಬೆಂಕಿಗಾಹುತಿ; ಮನೆಗಳಿಗೆ ಕಲ್ಲು ತೂರಾಟ;ಐವರಿಗೆ ಗಾಯ
ಕಾಸರಗೋಡು, ಅ.14: ನಗರದ ಹೊರವಲಯದ ಮೀಪಗುರಿಯಲ್ಲಿ ಗುರುವಾರ ತಡ ರಾತ್ರಿ ಹಿಂಸಾಚಾರ ನಡೆದಿದ್ದು, ಎರಡು ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಮೂರು ಮನೆಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಐವರಿಗೆ ಗಾಯಗಳಾಗಿವೆ.
ಮೀಪಗುರಿ ಕಾಲನಿಯಲ್ಲಿ ನಿನ್ನೆ ಸಂಜೆ ವಿದ್ಯಾರ್ಥಿಯೋರ್ವನಿಗೆ ತಂಡವೊಂದು ಬೆದರಿಕೆಯೊಡ್ಡಿತ್ತು. ಈ ಘಟನೆಯೇ ಹಿಂಸಾಚಾರಕ್ಕೆ ಕಾರಣವನ್ನಲಾಗಿದೆ. ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಶಂಕಿತ ಹಲವರನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಲ್ಲು ತೂರಾಟದಿಂದ ತೂರಿ ತೈವಳಪ್ಪಿನ ಇಬ್ರಾಹೀಂ (68), ಅವರ ಮಕ್ಕಳಾದ ಸಮೀರ್ (34), ಶಬೀರ್ (20) ಗಾಯಗೊಂಡಿದ್ದಾರೆ. ಕಲ್ಲು ತೂರಾಟದ ಬಳಿಕ ಮನೆಗೆ ನುಗ್ಗಿದ ತಂಡವೊಂದು ಬೆದರಿಸಿ ಹಲ್ಲೆ ನಡೆಸಿತೆನ್ನಲಾಗಿದೆ.ಈ ಘಟನೆಯ ಬಳಿಕ ಚೂರಿಯ ಚಂದ್ರ (20) ಹಾಗೂ ಆಟೊ ಚಾಲಕ ಚೆಂಗಳದ ಮುಹಮ್ಮದ್ ಕುಂಞಿ (50)ಯವರ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು, ಆಟೊಗೆ ಹಾನಿಯೆಸಗಲಾಗಿದೆ.ಮೀಪುಗುರಿಯ ಶ್ರೀಕಾಂತ್‌ರವರ ಮನೆಯಂಗಳದಲ್ಲಿರಿಸಲಾಗಿದ್ದ ಆಟೊಗೆ ಹಾಗೂ ಮೀಪುಗುರಿಯ ಇಂದು ಶೇಖರ, ಸುರೇಶ್ ಎಂಬವರ ಮನೆಗೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಆಟೊ ಹಾನಿಯಾಗಿದ್ದು, ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ.ಮೀಪುಗುರಿಯಲ್ಲಿ ಬೈಕ್‌ನಲ್ಲಿ ಬಂದ ತಂಡ ನವೀನ್ ಕುಮಾರ್ (30)ರನ್ನು ತಡೆದು ಬೆದರಿಸಿದ ಬಳಿಕ ಬೈಕ್‌ಗೆ ಬೆಂಕಿ ಹಚ್ಚಿದ್ದು, ಬೈಕ್ ಸಂಪೂರ್ಣ ಸುಟ್ಟು ಹೋಗಿದೆ.ಚೂರಿ ಕೋಟೆಕಣಿ ರಸ್ತೆಯ ದಿನಕರ್‌ರ ಮನೆಯಂಗಳದಲ್ಲಿರಿಸಲಾಗಿದ್ದ ಬೈಕ್‌ಗೆ ರಾತ್ರಿ ತಂಡವೊಂದು ಬೆಂಕಿ ಹಚ್ಚಿದೆ. ಬೈಕ್ ಭಾಗಶಃ ಸುಟ್ಟು ಹೋಗಿದೆ.ಮುಹಮ್ಮದ್ ಸಮೀರ್‌ರವರ ಮನೆಗೆ ಕಲ್ಲೆಸೆದು, ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ೩೦ ಮಂದಿಯ ಮೇಲೆ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹಿಂಸಾಚಾರದ ಹಿನ್ನೆಲೆಯಲ್ಲಿ ಮೀಪುಗುರಿ ಹಾಗೂ ಸಮೀಪದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿಂಸಾಚಾರ ವ್ಯಾಪಿಸದಂತೆ ಪೊಲೀಸರು ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ
ಮೀಪಗುರಿ ಕಾಲನಿಯಲ್ಲಿ ನಿನ್ನೆ ಸಂಜೆ ವಿದ್ಯಾರ್ಥಿಯೋರ್ವನಿಗೆ ತಂಡವೊಂದು ಬೆದರಿಕೆಯೊಡ್ಡಿತ್ತು. ಈ ಘಟನೆಯೇ ಹಿಂಸಾಚಾರಕ್ಕೆ ಕಾರಣವನ್ನಲಾಗಿದೆ. ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಶಂಕಿತ ಹಲವರನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಲ್ಲು ತೂರಾಟದಿಂದ ತೂರಿ ತೈವಳಪ್ಪಿನ ಇಬ್ರಾಹೀಂ (68), ಅವರ ಮಕ್ಕಳಾದ ಸಮೀರ್ (34), ಶಬೀರ್ (20) ಗಾಯಗೊಂಡಿದ್ದಾರೆ. ಕಲ್ಲು ತೂರಾಟದ ಬಳಿಕ ಮನೆಗೆ ನುಗ್ಗಿದ ತಂಡವೊಂದು ಬೆದರಿಸಿ ಹಲ್ಲೆ ನಡೆಸಿತೆನ್ನಲಾಗಿದೆ.



No comments:
Post a Comment