ಸುಪ್ರೀಂ ಕೋರ್ಟ್ ಮೆಟ್ಟಲೇರಲು ಸಜ್ಜಾದ ಕಾರ್ಮಿಕ ಅಬ್ದುಲ್ ಸಲಾಂ
ಕಾಸರಗೋಡು ಜಿಲ್ಲೆಯ ಕುಂಬಳೆಯ ಬಳಿಯ ವೆಲಿಯಪುರ ಎಂಬಲ್ಲಿನ ನಿವಾಸಿ ಅಬ್ದುಲ್ ಸಲಾಂ ಮಂಗಳೂರು ವಿಮಾನ ದುರಂತದಲ್ಲಿ ಮಗನನ್ನು ಕಳೆದು ಕೊಂಡ ವ್ಯಕ್ತಿ. ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತರಿಗೆ ಪರಿಹಾರ ನೀಡಬೇಕಾದ ಸಂದ ರ್ಭದಲ್ಲಿ ಏರ್ ಇಂಡಿಯಾ ಸಂಸ್ಥೆ ಚೌಕಾಸಿ ನಡೆಸಿ ಕಡಿಮೆ ಪರಿಹಾರ ವಿತರಿಸಲಾರಂಭಿ ಸಿತು. ಒಟ್ಟು 158 ಸಂತ್ರಸ್ತ ಕುಟುಂಬಗಳಲ್ಲಿ 64 ಸಂತ್ರಸ್ತರು ಏರ್ ಇಂಡಿಯಾದವರು ನೀಡಿದ ಕಡಿಮೆ ಮೊತ್ತದ ಪರಿಹಾರವನ್ನು ಸ್ವೀಕರಿಸಿದ್ದಾರೆ. ಆದರೆ ಅಬ್ದುಲ್ ಸಲಾಂ ಮಗ ನನ್ನು ಕಷ್ಟಪಟ್ಟು ಹಣ ಹೊಂದಿಸಿ ದುಬಾಯಲ್ಲಿ ಕೆಲಸಕ್ಕೆ ಸೇರಿಸಿದ್ದರು. ಮಗ ಪ್ರಥಮ ಬಾರಿಗೆ ಊರಿಗೆ ಮರಳುತ್ತಿರುವಾಗ ವಿಮಾನ ದುರಂತ ಸಂಭವಿಸಿ ಮಗ ಮುಹಮ್ಮದ್ ರಫಿ (23) ಯನ್ನು ಜೀವಂತವಾಗಿ ನೋಡಲಾಗಲಿಲ್ಲ. ಮೂರು ಸೆಂಟ್ಸ್ ಜಾಗದಲ್ಲಿ ಇನ್ನೂ ಪೂರ್ತಿ ಗೊಳ್ಳದ ಸಣ್ಣ ಮನೆಯಲ್ಲಿ ಪತ್ನಿ, ಮೂರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿರುವ ಅಬ್ದುಲ್ ಸಲಾಂ 10ನೆ ತರಗತಿ ಓದಿದ್ದಾರೆ. ಕಳೆದ 25 ವರ್ಷಗಳಿಂದ ಮೀನು ಹಿಡಿದು ಸಂಪಾದಿಸಿದ ಆದಾಯ ಕುಟುಂಬದ ಮುಖ್ಯ ಆರ್ಥಿಕ ಮೂಲ. ಏರ್ ಇಂಡಿಯಾ ಸಂಸ್ಥೆ ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕಾಗಿ ಬಂದ ಸಂದರ್ಭದಲ್ಲಿ ಸೇಲ್ಸ್‌ಮನ್ ಆಗಿದ್ದ ತನ್ನ ಮಗ ಮೃತ ಪಟ್ಟದಕ್ಕಾಗಿ ಕಡಿಮೆ ಮೊತ್ತದ ಪರಿಹಾರ ನೀಡಲು ಚೌಕಾಶಿ ನಡೆಸಲಾರಂಭಿಸಿದಾಗ ನೊಂದ ಸಲಾಂ ನ್ಯಾಯಯುತ ಪರಿಹಾರ ನೀಡಬೇಕೆಂದು ವಾದಿಸಿ ಕೇರಳದ ಉಚ್ಚ ನ್ಯಾಯಾಲಯದಲ್ಲಿ ಏರ್ ಇಂಡಿಯಾ ವಿರುದ್ಧ ದಾವೆ ಹೂಡಿದ್ದರು.ಉಚ್ಚ ನ್ಯಾಯಾಲಯ ಸಲಾಂ ಅರ್ಜಿಯನ್ನು ಪುರಸ್ಕರಿಸಿ ಮಾಂಟ್ರಿ ಯಲ್ ಒಡಂಬಡಿಕೆಯ ಪ್ರಕಾರ ಕನಿಷ್ಠ 75 ಲಕ್ಷ ರೂ. ಪರಿಹಾರ ಪಡೆಯಲು ಎಲ್ಲ ಕುಟುಂಬಗಳು ಅರ್ಹವಾಗಿವೆ ಎಂದಿತ್ತು. ಆದರೆ ಏರ್ ಇಂಡಿಯಾ ಸಂಸ್ಥೆ ಈ ತೀರ್ಪಿನ ವಿರುದ್ಧ ವಿಭಾಗೀಯ ಪೀಠದ ಮೊರೆ ಹೋಯಿತು. ವಿಭಾಗೀಯ ಪೀಠದ ಎರಡನೆ ಬೆಂಚ್, ಏರ್ ಇಂಡಿಯಾದ ಮನವಿಯನ್ನು ಪುರಸ್ಕರಿಸಿತು. ಇದರಿಂದ ನ್ಯಾಯಕ್ಕಾಗಿ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುವುದು ಸಲಾಂರಿಗೆ ಅನಿವಾರ್ಯವಾ ಗಿದೆ. ಸಲಾಂರ ಈ ಕಾನೂನು ಬದ್ಧ ಹೋರಾ ಟಕ್ಕೆ ಸಂತ್ರಸ್ತರ ಸಮಿತಿ ಬೆಂಬಲ ನೀಡುತ್ತಿದೆ. ಸಲಾಂ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯದ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

No comments:
Post a Comment