ರೈಲ್ವೇ ಪ್ರಯಾಣಿಕರ ಸಮಸ್ಯೆ ಪರಿಹಾರ

ಕಾಸರಗೋಡು: ಮೂರು ವರ್ಷದ ಬಳಿಕ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದ ದಕ್ಷಿಣ ವಲಯ ಜನರಲ್ ಮೆನೇಜರ್ ದೀಪಕ್ ಕಿಶನ್ ಕಾಸರಗೋಡು ಜಿಲ್ಲೆಯಲ್ಲಿ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು. ಕಾಸರಗೋಡು ರೈಲು ನಿಲ್ದಾಣಕ್ಕೆ ಪ್ರತ್ಯೇಕ ರೈಲು ಗಾಡಿಯಲ್ಲಿ ಬಂದ ಜನರಲ್ ಮೆನೇಜರ್ ದೀಪಕ್ ಕಿಶನ್ ಅವರನ್ನು ಸಂಸದ ಪಿ. ಕರುಣಾಕರನ್ ಅವರ ನೇತೃತ್ವದಲ್ಲಿ ಕಾಸರಗೋಡು ಪ್ಯಾಸೆಂಜರ್ ಅಸೋಸಿಯೇಶನ್ ಪದಾಧಿಕಾರಿಗಳಾದ ಆರ್. ಪ್ರಶಾಂತ್ ಕುಮಾರ್, ಡಾ| ಸಿ.ಎ. ಹಮೀದ್, ಡಾ| ವೆಂಕಟಗಿರಿ ಮೊದಲಾದವರು ಸ್ವಾಗತಿಸಿದರು. ಕಾಸರಗೋಡು ಜಿಲ್ಲೆಯಲ್ಲಿ ರೈಲು ಪ್ರಯಾಣಿಕರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕಾಸರಗೋಡಿನ ಪ್ರತಿನಿಧಿಗಳು ಜನರಲ್ ಮೆನೇಜರ್ ಅವರ ಗಮನಕ್ಕೆ ತಂದರು. ಬೇಡಿಕೆಗಳನ್ನು ಆಲಿಸಿದ ಜನರಲ್ ಮೆನೇಜರ್ ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನೂತನವಾಗಿ ಆರಂಭಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಶೀಘ್ರವೆ ಆರಂಭಿಸಬೇಕು, ಮಂಗಳೂರು - ಕಣ್ಣೂರು ಪ್ಯಾಸೆಂಜರ್ ರೈಲುಗಾಡಿ ಆರಂಭಿಸಬೇಕು, ರೈಲು ಪ್ರಯಾಣಿಕರ ಸಮಸ್ಯೆ ಪರಿಹರಿಸಲು ಹೆಚ್ಚಿನ ಬೋಗಿಗಳನ್ನು ಅಳವಡಿಸಬೇಕು, ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಾಡಿ ನಿಲುಗಡೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮಂದಿರಿಸಿತು. ನಿಯೋಗದಲ್ಲಿ ಡಾ| ಸುರೇಶ್ ಬಾಬು, ಆರ್. ಪ್ರಶಾಂತ್ ಕುಮಾರ್, ಡಾ| ಸಿ.ಎ. ಹಮೀದ್, ಕೆ. ನಾಗರಾಜ್, ಆರ್. ಲತೀಶ್ ಕುಮಾರ್, ಅನಿಲ್ ಕರ್ವತ್ತಡ್ಕ, ಸುಂದರ ಆರಿಕ್ಕಾಡಿ, ಡಿ. ಜಯರಾಂ, ಸಿ.ಡಿ. ನಾಯರ್ ಮೊದಲಾದವರಿದ್ದರು.
No comments:
Post a Comment