സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Tuesday, October 11, 2011

ಕಾಸರಗೋಡು,ಸಂತೋಷ್ ನಗರದ ರಾಷ್ಠ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ - ಕಾರಿಗೆ ಬಸ್ ಢಿಕ್ಕಿ : ಇಬ್ಬರ ಸಾವು - 20 ಮಂದಿಗೆ ಗಂಭೀರ ಗಾಯ
ಕಾಸರಗೋಡು:ಕಾಸರಗೋಡು ಹೊರವಲಯದ ಚೆಂಗಳ,ಸಂತೋಷ್ ನಗರ ಎಂಬಲ್ಲಿನ  ರಾಷ್ಟ್ರೀಯ ಹೆದ್ದಾರಿಯಲ್ಲಿ  ನಿನ್ನೆ ಇನೋವಾ ಕಾರಿಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ಸುಮಾರು 20ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಕಣ್ಣೂರು ಚಕ್ಕರಕಲ್ ಎಂಬಲ್ಲಿನ ಮಣಿಕಂಠ (37) ಹಾಗೂ ಶ್ರೀಕುಮಾರ್ (48) ಅಪಘಾತದಿಂದ ಮೃತಪಟ್ಟಿದ್ದಾರೆ.ಇವರಿದ್ದ ಕಾರಿಗೆ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಅಪಘಾತದ ರಭಸಕ್ಕೆ ಇನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಿಂದಾಗಿ ಬಸ್ ಪ್ರಯಾಣಿಕರಾದ ಮೈಲಾಟಿ ಕುನ್ನುಮ್ಮಲ್‌ನ ಶಂಕರ ಪಿಳ್ಳೈ (45),ಅವರ ಪತ್ನಿ ಜಾನಕಿ (40), ಪಾಲಕ್ಕಾಡ್‌ನ ಜೋಜಿ ಮ್ಯಾಥ್ಯೂ (33),ಸಿಪಿಎಂ ಜಿಲ್ಲಾ ಸಮಿತಿಯ ಸದಸ್ಯ ವಿ.ನಾರಾಯಣನ್ (55), ಪೆರಿಯಾಟಡ್ಕದ ಸೀತಾಲಕ್ಷ್ಮಿ (50) ತಾಯನ್ನೂರು ಎಣ್ಣಪ್ಪಾರದ ಕಾರಿಚ್ಚಿ (60), ಚೆರ್ಕಳದ ಅಬ್ದುರ್ರಹ್ಮಾನ್ (60), ಕಣ್ಣೂರಿನ ಸಜಿತ (26), ತಳಿಪರಂಬದ ಸುನಿಲ್ ಕುಮಾರ್ (30), ಉಷಾ (30), ಪೊನಾಚಿ ಪೊಳ್ಳಕಡದ ದಾಮೋದರ ನಂಬ್ಯಾರ್ (55), ಚಿಮೇನಿಯ ನೀತು (14), ಪೆರಿಯದ ಧನ್ಯ (25), ಕೂಡ್ಲು ಮನ್ನಿಪ್ಪಾಡಿಯ ಸುರೇಶ್‌ರವರ ಪತ್ನಿ ಬೇಬಿ (32) ಸೇರಿದ್ದಾರೆ. ಇವರನ್ನು ನಗರದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.


ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: