സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Saturday, September 17, 2011

ಉಪವಾಸದ ಮುನ್ನ ವಿಷಾದ

ನವದೆಹಲಿ/ಅಹ್ಮದಾಬಾದ್‌:'ಕಳೆದ 10 ವರ್ಷಗಳಲ್ಲಿ ನನ್ನ ತಪ್ಪು ಗುರುತಿಸಿ, ತಿದ್ದಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ'. ಇದು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಹಿರಂಗ ಪತ್ರ. ಶನಿವಾರದಿಂದ ಆರಂಭವಾಗಲಿರುವ 3 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಈ ಪತ್ರ ಬರೆದಿದ್ದಾರೆ. ಒಂದೆಡೆ ಈ ಪತ್ರ ಮೋದಿ ಪರೋಕ್ಷವಾಗಿ ಕ್ಷಮೆ ಕೇಳುತ್ತಿದ್ದಾರೆಯೇ ಎಂದು ಭಾಸವಾಗುತ್ತಿದೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕರು, ಗುಜರಾತ್‌ ನರಮೇಧ ಸಂಬಂಧ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದಿದ್ದರು. ಅದರಂತೆ ಮೋದಿ ಈ ನಡೆ ತೆಗೆದುಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಕೋಮುವಾದದಿಂದಾಗಲಿ, ಜಾತೀಯತೆಯಿಂದಾಗಲಿ ಏನನ್ನೂ ಸಾಧಿಸಲಾಗುವುದಿಲ್ಲ. ಗೋಧ್ರಾ ನರಮೇಧ ರಾಜ್ಯದ ಪಾಲಿಗೆ ಕಪ್ಪುಚುಕ್ಕೆ. ಇದರಿಂದ ಯಾವ ರೀತಿ ಹಾನಿಯಾಗುತ್ತದೆ ಎಂಬುದನ್ನು ಕಳೆದ 10 ವರ್ಷ ಗುಜರಾತ್‌ ಅನುಭವಿಸಿದೆ. ಏನೇ ಆಗಲಿ, ಈ ಎಲ್ಲಾ ವರ್ಷಗಳಲ್ಲಿ ನನ್ನ ತಪ್ಪುಗಳನ್ನು ಗುರುತಿಸಿ, ತಿದ್ದಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಎಲ್ಲವೂ ಪ್ರಧಾನಿ ಹುದ್ದೆಗಾಗಿ: 2014ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿಯೇ ಎಂದು ಹೇಳಲಾಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿಯೇ ಮೋದಿ 3 ದಿನಗಳ ಉಪವಾಸ ಕುಳಿತಿದ್ದಾರೆ ಎನ್ನಲಾಗಿದೆ. ಅಲ್ಲದೆ ಉಪವಾಸ ಸತ್ಯಾಗ್ರಹಕ್ಕೆ ಒಂದು ದಿನ
ಇರುವಂತೆಯೇ ಬಹಿರಂಗಪತ್ರ ಬರೆದಿರುವುದು ಕುತೂಹಲಕ್ಕೆಡೆ ಮಾಡಿದೆ. ಮೋದಿ ನಿತೀಶ್‌ ಕುಮಾರ್‌ ಅವರ ಮನಗೆಲ್ಲಲು ಈ ಪತ್ರ ಬರೆದಿದ್ದಾರೆಯೇ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ಅಂತಿಮ ಸಿದ್ಧತೆ: ಶನಿವಾರದಿಂದ ಅಹ್ಮದಾಬಾದ್‌ನಲ್ಲಿ ನರೇಂದ್ರ ಮೋದಿ ಅವರ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ. ಸದ್ಭಾವನಾ ಮಿಷನ್‌ ಎಂಬ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುವಂತೆ ಮೋದಿ ಜನರಲ್ಲಿ ಕೋರಿದ್ದಾರೆ. ಇತ್ತೀಚಿನ ಸುಪ್ರೀಂಕೋರ್ಟ್‌ ಆದೇಶ ತಮ್ಮ ವಾದಕ್ಕೆ ಪುಷ್ಟಿ ನೀಡಿದ್ದು, ಗುಜರಾತ್‌ ಗಲಭೆಯಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ. ಈಗಾಗಲೇ ಮೋದಿ ಉಪವಾಸಕ್ಕಾಗಿ ಗುಜರಾತ್‌ ವಿಶ್ವವಿದ್ಯಾನಿಲಯದ ಕಲಾ ಗ್ಯಾಲರಿಯಲ್ಲಿ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದೆ. ಆಡ್ವಾಣಿ ಜೊತೆಗೆ ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ, ರಾಜ್‌ನಾಥ್‌ ಸಿಂಗ್‌, ರವಿಶಂಕರ್‌ ಪ್ರಸಾದ್‌, ಅನಂತ್‌ಕುಮಾರ್‌ ಸೇರಿದಂತೆ ಬಿಜೆಪಿಯ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷ ನಿತಿನ್‌ ಗಡ್ಕರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧ ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಿಲ್ಲ. ಇದೇ ವೇಳೆ ಕಾಂಗ್ರೆಸ್‌ ಕೂಡ ಮೋದಿಗೆ ಪ್ರತಿಯಾಗಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದೆ. ಸಬರ್‌ಮತಿ ಆಶ್ರಮದ ಮುಂದಿನ ಫ³ುಟ್‌ಬಾತ್‌ನಲ್ಲಿ 3 ದಿನಗಳ ಉಪವಾಸ ಸತ್ಯಾಗ್ರಹ ನಡೆಸಲಿದೆ. ಉಪವಾಸಕ್ಕೆ ಜಯಾ ಬೆಂಬಲ: ಇದೇ ವೇಳೆ ಮೋದಿ ಉಪವಾಸ ಸತ್ಯಾಗ್ರಹಕ್ಕೆ ತಮಿಳುನಾಡು ಸಿಎಂ ಜಯಲಲಿತಾ ಬೆಂಬಲ ಸೂಚಿಸಿದ್ದಾರೆ. ಪಂಜಾಬ್‌ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್‌ ಕೂಡ ಮೋದಿ ಜೊತೆ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಮೋದಿಯೇ ಪ್ರಧಾನಿ ಅಭ್ಯರ್ಥಿ: ಆಡ್ವಾಣಿ ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ಕಾಂಗ್ರೆಸ್‌ ಸಂಸದರ ಸಂಶೋಧನಾ ವರದಿ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಮೋದಿಯಾಗಬಹುದು ಎಂದಿತ್ತು. ಈ ವರದಿಗೆ ಸಮ್ಮತಿ ಸೂಚಿಸಿರುವ ಬಿಜೆಪಿ ಹಿರಿಯ ನಾಯಕ ಆಡ್ವಾಣಿ, ಅಮೆರಿಕದ ಸಂಸದರು ಮೋದಿಯನ್ನು ಪ್ರಧಾನಿಯನ್ನಾಗಿ ಕಾಣಲು ಬಯಸಿದ್ದಾರೆ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯದಲ್ಲೇ ಆಡ್ವಾಣಿ ರಥಯಾತ್ರೆ ಮಾಡಲಿದ್ದಾರೆ. ಹೀಗಾಗಿ ಆಡ್ವಾಣಿ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಮೋದಿ ಕುರಿತ ಬಿಜೆಪಿ ಹಿರಿಯ ನಾಯಕನ ಹೇಳಿಕೆ ಅಚ್ಚರಿ ತರಿಸಿದೆ. ಮೋದಿಯೇ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂಬುದನ್ನು ನಿಶ್ಚಿತವಾಗಿ ಆಡ್ವಾಣಿ ಎಲ್ಲೂ ಹೇಳಿಲ್ಲ. ಆದರೆ ಅಮೆರಿಕದ ವರದಿಗೆ ಅವರು ಸಮ್ಮತಿ ಸೂಚಿಸಿದ್ದಾರಷ್ಟೇ.

No comments: