സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Monday, March 14, 2011

ಕೊಚ್ಚಿ ಫ್ರಾಂಚೈಸಿ ತಂಡದ ನೂತನ ಹೆಸರು ‘ಕೊಚ್ಚಿ ತಸ್ಕರ್ಸ್ ಕೇರಳ’

www.pavoornews.blogspot.com 


ಅಭಿಮಾನಿಗಳಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಕೊಚ್ಚಿ ಫ್ರಾಂಚೈಸಿ ತಂಡದ ಹೆಸರನ್ನು ಮರು ನಾಮಕರಣ ಮಾಡಲು ಮುಂದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದೇ ಮೊದಲ ಪದಾರ್ಪಣೆ ಮಾಡುತ್ತಿರುವ ಕೊಚ್ಚಿ ತಂಡವು ಇನ್ನು ಮುಂದೆ ಅಭಿಮಾನಿಗಳ ಬಯಕೆಯಂತೇ ‘ಕೊಚ್ಚಿ ತಸ್ಕರ್ಸ್ ಕೇರಳ’ ಹೆಸರಿನಿಂದ ಗುರಿತಿಸ್ಪಡಲಿದೆ.
ಕೆಲವು ದಿನಗಳ ಹಿಂದೆಯಷ್ಟೇ ಕೊಚ್ಚಿ ತಂಡಕ್ಕೆ ‘ಇಂಡಿ ಕಮಾಂಡೋಸ್’ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಅಭಿಮಾನಗಳು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದಾಗಿ ತಂಡದ ವೆಬ್‌ಸೈಟ್‌ನಲ್ಲಿ ನೂತನ ಹೆಸರು ಸಲಹೆ ಮಾಡುವಂತೆ ಅಭಿಮಾನಿಗಳಿಗೆ ಫ್ರಾಂಚೈಸಿ ಅನುವು ಮಾಡಿಕೊಟ್ಟಿತ್ತು. ಇದರಂತೆ ನೂತನ ಹೆಸರನ್ನು ಆರಿಸಲಾಗಿದೆ.
ಕೊಚ್ಚಿ ತಸ್ಕರ್ಸ್ ಕೇರಳಕ್ಕೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಅಂಗೀಕಾರಕ್ಕಾಗಿ ಕಾಯುತ್ತಿದೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಮೂಲಗಳು ತಿಳಿಸಿವೆ.
ಐಪಿಎಲ್ ನಾಲ್ಕನೇ ಆವೃತ್ತಿನಲ್ಲಿ ಕೊಚ್ಚಿ ತಂಡವು ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಪ್ರಿಲ್ 9ರಂದು ಆಡಲಿದೆ.

No comments: